ಬ್ರಾಹ್ಮಿ ಲಿಪಿಯು ಅತ್ಯಂತ ಪ್ರಾಚೀನವಾದ ಲಿಪಿ. ಇದರಿಂದ ಏಷ್ಯಾದ ಹಲವು ಲಿಪಿಗಳ ಅಭಿವೃದ್ಧಿಯಾಗಿದೆ. ದೇವನಾಗರಿ ಮತ್ತು ಇತರ ದಕ್ಷಿಣ ಏಷ್ಯಾ, ಆಗ್ನೇಯ ಏಷ್ಯಾ, ಟಿಬೆಟ್ ಮತ್ತು ಕೆಲವು ಜನರರ ಪ್ರಕಾರ ಕೊರಿಯನ್ ಲಿಪಿಯ ಅಭಿವೃದ್ಧಿಯು ಇದರಿಂದಾಗಿದೆ. ಕ್ರಿ.ಪೂ ನಾಲ್ಕನೇ ಶತಮಾನದಲ್ಲಿ ಬ್ರಾಹ್ಮಿ ಲಿಪಿ ಇತ್ತು. ಈಗ ಭಾರತದಲ್ಲಿರುವ ಎಲ್ಲಾ ಭಾಷೆಗಳ ಲಿಪಿ ಬ್ರಾಹ್ಮಿಯಲ್ಲಿದೆ. ಕ್ರಿ.ಪೂ.೪ನೇಯ ಶತಮಾನದಲ್ಲಿ ಬ್ರಾಹ್ಮಿ ಲಿಪಿಯಲ್ಲಿ ಪಾಣಿನಿಯು ರಚಿಸಿದ ಅಷ್ಟಾಧ್ಯಾಯಿ ಎಂಬ ಸಂಸ್ಕೃತ ವ್ಯಾಕರಣದ ನಿಯಮಾನುಸಾರವಾಗಿ ಕನ್ನಡ ಲಿಪಿಯು ಬರೆಯಲಾಯಿತು ಎಂದು ನಂಬಲಾಗಿದೆ. ಮೌರ್ಯ ಸಾಮ್ರಾಜ್ಯದ ಚಕ್ರವರ್ತಿ ಸಾಮ್ರಾಟ್ ಅಶೋಕ ಎಲ್ಲಾ ಶಾಸನಗಳು ಬ್ರಾಹ್ಮಿ ಲಿಪಿಯಲ್ಲಿಯೇ ಬರೆಯಲ್ಪಟ್ಟಿದೆ. "ಆದಿ ತೀರ್ಥಂಕರ ವೃಷಭದೇವನು ತನ್ನ ಕುಮಾರಿಯಾದ ಬ್ರಾಹ್ಮೀ ಸುಂದರಿಯರಿಗೆ ಕನ್ನಡ ಅಂಕಾಕ್ಷರಗಳನ್ನು ವಿವರಿಸಿದ ಕಾರಣದಿಂದಾಗಿ ಈ ಅಕ್ಷರ ಲಿಪಿಗೆ 'ಬ್ರಾಹ್ಮೀಲಿಪಿ' ಎಂದು ಅಂಕಲಿಪಿಗೆ 'ಸುಂದರಿ ಲಿಪಿ' ಎಂದು ಹೆಸರಾಗಿದೆ. ಈ ವಿಷಯವನ್ನು ಸಿರಿ ಭೂವಲಯವು ಬಹಳ ಸ್ಪಷ್ಟವಾಗಿ ತಿಳಿಸಿದೆ. == ಬ್ರಾಹ್ಮಿ ಲಿಪಿ == == ನೋಡಿ == ಕನ್ನಡ ಕನ್ನಡ ಅಕ್ಷರಮಾಲೆ ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಬ್ರಾಹ್ಮೀಲಿಪಿ == ಬಾಹ್ಯ ಸಂಪರ್ಕಗಳು == ಪ್ರಾಕೃತ, ಸಂಸ್ಕೃತ, ಕನ್ನಡ :ಆರಂಭಕಾಲದ ಭಾಷಾಬಾಂಧವ್ಯ:ಭಾಷೆಗಳ ಬಳ್ಳಿ ಮತ್ತು ಅಕ್ಷರಸಮಾಜ;ಷ. ಶೆಟ್ಟರ್;5 , 2017 2017-02-04 ವೇಬ್ಯಾಕ್ ಮೆಷಿನ್ ನಲ್ಲಿ. : , ( .) – 2014-01-10 ವೇಬ್ಯಾಕ್ ಮೆಷಿನ್ ನಲ್ಲಿ. == ಉಲ್ಲೇಖ ==